ಇಸ್ಕಾನ್ ಸಂಸ್ಥಾಪಕಾಚಾರ್ಯ, ವಿಶ್ವಗುರು ಶ್ರೀ ಶ್ರೀಮದ್ ಅಭಯ ಚರಣಾರವಿಂದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರನ್ನು ಕುರಿತ ‘ಶ್ರೀಲ ಪ್ರಭುಪಾದ ಚರಿತಾಮೃತಮ್- ಕನ್ನಡ ಮಹಾಕಾವ್ಯ‘ ಎಂಬ ಕೃತಿಯನ್ನು ಇಸ್ಕಾನ್ ಬೆಂಗಳೂರು ಹೊರತರುತ್ತಿದೆ.
ಪುಸ್ತಕ ಮತ್ತು ಲೇಖಕರ ಪರಿಚಯ
ಕನ್ನಡ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಸರಾಂತ ಕವಿ ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್ ಈ ಪುಸ್ತಕದ ಕರ್ತೃ. ಇದು ವಿಶ್ವಗುರು ಶ್ರೀಲ ಪ್ರಭುಪಾದರ ದಿವ್ಯ ಜೀವನಗಾಥೆಯನ್ನು ವರ್ಣಿಸುವ ವಿಶ್ವದ ಪ್ರಪ್ರಥಮ ಮಹಾಕಾವ್ಯ.
ಇದು 18 ಸಾಲುಗಳ ಲಲಿತಗತಿಯ ‘ಅಷ್ಟಾದಶ ಪದಿ’ ಛಂದಸ್ಸಿನ ಕ್ರಮದಲ್ಲಿ ವಿನ್ಯಾಸಗೊಂಡಿದ್ದು, ನಡುಗನ್ನಡ ಹಾಗೂ ಹೊಸಗನ್ನಡ ಮಿಶ್ರಣದ ಗಮಕಕಲೆಯಾಗಿ ಮೂಡಿದೆ. ಆಧುನಿಕ ಕನ್ನಡ ಕಾವ್ಯಪ್ರಪಂಚದ ಭಕ್ತಿಪರಂಪರೆಯ ‘ಕಾವ್ಯ ಸಂಕೀರ್ತನೆ’ಯಾಗಿ ಹೊರಹೊಮ್ಮಿದೆ.
ಶ್ರೀಲ ಪ್ರಭುಪಾದರ ಪರಿಚಯ
‘ಕೃಷ್ಣ ಭಕ್ತಿಯನ್ನು ಪಾಶ್ಚಾತ್ಯ ದೇಶಗಳಲ್ಲಿ ಪ್ರಚುರಿಸು!’ ಎಂಬ ತಮ್ಮ ಗುರುಗಳ ದಿವ್ಯಾದೇಶವನ್ನು ಇಪ್ಪತ್ತೈದನೇ ಪ್ರಾಯದ ಯುವಕನಾಗಿದ್ದಾಗಲೇ ಪಡೆದು ತಮ್ಮ ಜೀವನದ ಗುರಿಯಾಗಿಟ್ಟುಕೊಂಡು ಎಪ್ಪತ್ತರ ಇಳಿ ವಯಸ್ಸಿನಲ್ಲೂ ಪಾಲಿಸುವ ಸಂಕಲ್ಪದಿಂದಲೇ — ಭಾಗವತ ಪುಸ್ತಕಗಳ ಒಂದು ಟ್ರಂಕ್ ಪೆಟ್ಟಿಗೆ, ಜೇಬಿನಲ್ಲಿ ಕೇವಲ 40 ರೂಪಾಯಿಗಳೊಂದಿಗೆ, ಕಲ್ಕತ್ತಾದಿಂದ ನ್ಯೂಯಾರ್ಕ್ ನಗರದವರೆಗೆ ಜಲದೂತ ಕಾರ್ಗೋ ಶಿಪ್ ನಲ್ಲಿ 38 ದಿನಗಳ ಕಠಿಣ ಪ್ರಯಾಣಕ್ಕೆ ಹೊರಟರು. ಪ್ರಯಾಣದ ಮಧ್ಯೆ ಎರಡು ಹೃದಯಾಘಾತಗಳನ್ನು ಅನುಭವಿಸಿದರೂ, ಯಾವುದೇ ಅನುಯಾಯಿಗಳಿಲ್ಲದೆ, ಸಂಪೂರ್ಣ ಅಪರಿಚಿತ ದೇಶದಲ್ಲಿ — ಕೇವಲ ಗುರು ಮತ್ತು ಕೃಷ್ಣನ ಕೃಪೆಯ ಮೇಲಷ್ಟೇ ಸಂಪೂರ್ಣ ನಿರ್ಭರನಾಗಿ, ಪಾಶ್ಚಾತ್ಯ ಭೂಮಿಯಲ್ಲಿ ಕೃಷ್ಣಭಕ್ತಿಯನ್ನು ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆಯೊಂದಿಗೆ ಪ್ರಾರಂಭಿಸಿದರು.
ಅವರು ನ್ಯೂಯಾರ್ಕ್ನ ಟಾಂಪ್ಕಿನ್ಸ್ ಸ್ಕ್ವೇರ್ ಪಾರ್ಕ್ ನಲ್ಲಿ ಒಂದು ಮರದ ಕೆಳಗೆ ಕುಳಿತು ಹರೇ ಕೃಷ್ಣ ಮಹಾಮಂತ್ರವನ್ನು ಕೀರ್ತಿಸಿದಾಗ, ಆ ಸಂಕೀರ್ತನೆ ನಗರದ ಗದ್ದಲದಲ್ಲಿ ಮುಳುಗಿದ್ದ ಯುವ ಹೃದಯಗಳನ್ನು ಸ್ಪರ್ಶಿಸಿ, ಆ ಹರೇ ಕೃಷ್ಣ ಸಂಕೀರ್ತನೆಯಿಂದಲೇ ಜನಿಸಿತು ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಅಥವಾ ಇಸ್ಕಾನ್.
ಶ್ರೀಲ ಪ್ರಭುಪಾದರು ಭಗವದ್ಗೀತೆ, ಶ್ರೀಮದ್ಭಾಗವತ, ಚೈತನ್ಯ ಚರಿತಾಮೃತ ಸೇರಿದಂತೆ 80ಕ್ಕೂ ಹೆಚ್ಚು ವೈದಿಕ ಗ್ರಂಥಗಳ ಮೂಲಕ ಪರಮ ಪುರುಷ ಭಗವಂತ ಶ್ರೀಕೃಷ್ಣನ ತತ್ವವನ್ನು ಇಡೀ ಜಗತ್ತಿಗೆ ಪ್ರಕಾಶಿಸಿದರು. ಕೇವಲ ಹನ್ನೆರಡು ವರ್ಷಗಳಲ್ಲೇ ಅವರು 108ಕ್ಕಿಂತ ಹೆಚ್ಚು ದೇವಾಲಯಗಳ ಜೊತೆಗೆ ವೈದಿಕ ಕೃಷಿ ಆಶ್ರಮಗಳು, ಗುರುಕುಲಗಳು ಮತ್ತು ಆಧ್ಯಾತ್ಮಿಕ ಸಮುದಾಯಗಳನ್ನು ಸ್ಥಾಪಿಸಿದರು.
ಅಮೆರಿಕದಿಂದ ರಷ್ಯಾವರೆಗೆ, ಆಸ್ಟ್ರೇಲಿಯಾದಿಂದ ಸ್ವಿಟ್ಜರ್ಲ್ಯಾಂಡ್ನವರೆಗೆ, ಶ್ರೀಲ ಪ್ರಭುಪಾದರು ಒಂದು ವೈಶ್ವಿಕ ಭಕ್ತಿ ಚಳವಳಿಯನ್ನು ಪ್ರಾರಂಭಿಸಿದರು. ಇಂದಿಗೂ ಆ ಚಳವಳಿ ಇಸ್ಕಾನ್ ರೂಪದಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಸತತವಾಗಿ ವಿಸ್ತರಿಸುತ್ತಲೇ ಇದೆ.
ಹಿಂದೆಂದೂ ಕಾಣದ ರೀತಿಯಲ್ಲಿ ಕೃಷ್ಣಭಕ್ತಿಯನ್ನು ಪ್ರಚಾರ ಮಾಡಿ, ಕೇವಲ ಹನ್ನೆರಡು ವರ್ಷಗಳಲ್ಲಿ 14 ಬಾರಿ ವಿಶ್ವಪರ್ಯಟನೆಯನ್ನು ನಡೆಸಿ, ಜಗತ್ತಿನ ನಾನಾ ಭಾಗಗಳಲ್ಲಿ ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡಿ, ಪ್ರಪಂಚದ ಆರು ಖಂಡಗಳ ಅನೇಕ ದೇಶಗಳ ಜನರ ಮೇಲೆ ಹರಿನಾಮದ ಗಂಗೆಯನ್ನು ಹರಿಸಿದ ಮಹಾಪುರುಷ ಶ್ರೀಲ ಪ್ರಭುಪಾದರ ಬಗ್ಗೆ ತಿಳಿದುಕೊಳ್ಳುವುದೇ ಒಂದು ರೋಮಾಂಚನಕಾರಿ ಅನುಭವ.
ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್ ರಿಂದ ರಚಿತ ಸುಂದರ ಸುಮಧುರ ‘ಶ್ರೀಲ ಪ್ರಭುಪಾದ ಚರಿತಾಮೃತಮ್ – ಕನ್ನಡ ಮಹಾಕಾವ್ಯ’ ಪುಸ್ತಕವು ಇಂದೇ ನಿಮ್ಮ ಕೈ ಸೇರಲಿ.
ಪುಸ್ತಕ ಬಿಡುಗಡೆ:
- ಭಾನುವಾರ, ಡಿಸೆಂಬರ್ 21, 2025
- ಬೆಳಗ್ಗೆ 9:30 ರಿಂದ
- ರಾಜಾಂಗಣ, ಶ್ರೀ ಕೃಷ್ಣ ಮಠ, ಉಡುಪಿ
ದಿವ್ಯ ಸಾನ್ನಿಧ್ಯ:
ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು
ಪರ್ಯಾಯ ಶ್ರೀಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ
ಪರಮಪೂಜ್ಯ ಶ್ರೀ ಶ್ರೀ ಕೈಲಾಶಾನಂದ ಗಿರಿ ಮಹಾರಾಜ್
ಆಚಾರ್ಯ ಮಹಾಮಂಡಲೇಶ್ವರ, ನಿರಂಜನಿ ಅಖಾಡಾ, ಹರಿದ್ವಾರ
ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು
ಕಿರಿಯ ಪಟ್ಟ, ಪರ್ಯಾಯ ಶ್ರೀಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ
ಅಧ್ಯಕ್ಷತೆ:
ಶ್ರೀ ಮಧು ಪಂಡಿತ್ ದಾಸ
ಅಧ್ಯಕ್ಷರು ಮತ್ತು ಮಾರ್ಗದರ್ಶಕರು, ಜಾಗತಿಕ ಹರೇ ಕೃಷ್ಣ ಆಂದೋಲನ
ಅಧ್ಯಕ್ಷರು, ಇಸ್ಕಾನ್ ಬೆಂಗಳೂರು ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನ
ಲೇಖಕರು:
ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್
ಇಂದೇ ನಿಮ್ಮ ಪ್ರತಿಯನ್ನು ಖರೀದಿಸಿ.
